ಜೋಪಡಿ ಕಿತ್ತೆಸೆದು ಬಂದರೂ ತವರೂರು ಸೇರಲಿಲ್ಲ; ಗರ್ಭಿಣಿ ಪಡಿಪಾಟಲು ಕೇಳುವರಿಲ್ಲ
ಬೆಂಗಳೂರು; ಬಸ್ ಶೆಲ್ಟರ್ ತುಂಬೆಲ್ಲಾ ಮೆತ್ತಿಕೊಂಡಿದ್ದ ಧೂಳಿನಲ್ಲೇ ಕುಳಿತಿದ್ದವರ ಮುಖ ಬಿಸಿಲಿಗೆ ಬಾಡಿ ಹೋಗಿತ್ತು. ಬಾಯಾರಿಸಿಕೊಳ್ಳಲು ಹನಿ ನೀರು ಸಿಗಬಹುದೇ ಎಂದು ಅತ್ತಿಂದಿತ್ತ ಒಂದಷ್ಟು ಮಂದಿ ಕಣ್ಣಾಯಿಸುತ್ತಿದ್ದರು. ...

